menu

Thursday, November 5, 2020

ಹೃದಯ ಸ್ಪರ್ಶಿ ಬೀಳ್ಕೊಡುಗೆ ಸಮಾರಂಭ

 ದಿನಾಂಕ 29.09.2018 ರಿಂದ ದಿನಾಂಕ 08.08.2020 ವರೆಗೆ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಶ್ರೀಮತಿ ಕಮಲಾ.ಸಿ.ಎಸ್, ಕೆ.ಈ.ಎಸ್ ರವರಿಗೆ ಭಾವಸ್ಪರ್ಶಿ ಬೀಳ್ಕೊಡುಗೆಯನ್ನು ದಿನಾಂಕ 04.11.2020 ರಂದು ನಮ್ಮ ಶಾಲೆಯಲ್ಲಿ ನೀಡಲಾಯಿತು.



ಇವರು ನಮ್ಮ ಶಾಲೆಯ ಮುಖ್ಯ ಶಿಕ್ಷರಾಗಿದ್ದ ವೇಳೆಯಲ್ಲಿ ಹಲವು ಶಾಲಾ ಅಭಿವೃದ್ಧಿ ಕೆಲಸಗಳಾದವು ಎಂದರೆ ಅತೀಶಯೋಕ್ತಿಯಲ್ಲ. ಇವರ ಅವಧಿಯಲ್ಲಿ ಶಾಲಾ ಕಟ್ಟಡಕ್ಕೆ ಸುಂದರ ಬಣ್ಣದ ವ್ಯವಸ್ಥೆ, ಕೊಠಡಿಗಳ ದುರಸ್ತಿ, ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಆಯೋಜನೆ, ಎರಡು ವರ್ಷಗಳ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಯೋಜನೆ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ನೂತನ ಕಲಿಕಾ ಕಾರ್ಯಕ್ರಮಗಳು, ಶಾಲಾ 10 ನೇ ತರಗತಿ ಫಲಿತಾಂಶ ಶೇಕಡಾ 100 ರ ಗುರಿಯನ್ನು ತಲುಪಿದ್ದು, ನೂತನ ಬ್ಲಾಗ್ ರಚನೆಗೆ ಅಡಿಪಾಯ ಪ್ರಾರಂಭವಾಗಿದ್ದು ಹೀಗೆ ಹಲವು ನಾವೀನ್ಯತೆಗಳಿಗೆ ಶಾಲೆ ತೆರೆದುಕೊಂಡಿತು.



ಇವರು ನಮ್ಮ ಶಾಲೆಯಿಂದ ಸ್ಥಾನಪನ್ನ ಬಡ್ತಿಯನ್ನು ಹೊಂದಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮನಾಂತರ ಹುದ್ದೆಯಾದ ಉಪನ್ಯಾಸಕರು, ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ, ಮೈಸೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ವೃತ್ತಿ ಜೀವನ ಮತ್ತು ವೈಯುಕ್ತಿಕ ಜೀವನವು ಸುಖಮಯವಾಗಿರಲೆಂದು ನಮ್ಮ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಬಳಗ, ಕಛೇರಿ ಸಿಬ್ಬಂದಿ, ಅಕ್ಷರ ದಾಸೋಹ ಸಿಬ್ಬಂದಿ, ಶಾಲಾ ಎಸ್ಡಿಎಂಸಿ, ವಿದ್ಯಾರ್ಥಿಗಳು,  ಪೋಷಕರು, ಗ್ರಾಮಸ್ಥರು ಶುಭ ಕೋರುತ್ತೇವೆ.

  

No comments:

Post a Comment

FIRST POST

 ;odsirj;OSIEjf;OIen [oWU[93Qu []93UT[3 r ][9Q(up[      9u2 [9qU[]90     U4[90 []N04[R09     82U4P980     724P98     624