menu

Friday, August 13, 2021

ಎಸ್ ಎಸ್ ಎಲ್ ಸಿ ಫಲಿತಾಂಶ 2020 - 2021

 ಕೊರೋನ ಎರಡನೇ ಅಲೆಯ ನಡುವೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಗೆದ್ದು ಸಂಭ್ರಮಿಸಿದ್ದಾರೆ. ಇಡೀ ಶೈಕ್ಷಣಿಕ ವರ್ಷದಲ್ಲಿ ಭೌತಿಕ ತರಗತಿಗಳು ಕೇವಲ 60 ರಿಂದ 70 ದಿನಗಳು ನಡೆದಿದ್ದರು ಕೂಡ ಮಕ್ಕಳು ವರ್ಷ ಪೂರ್ತಿ ವಿದ್ಯಾಗಮ, ಗೂಗಲ್ ಮೀಟ್ ಆನ್ಲೈನ್ ತರಗತಿಗಳು, ವಾಟ್ಸಾಪ್ ಮೂಲಕ ನಿರಂತರ ವಿದ್ಯಾರ್ಥಿ ಶಿಕ್ಷಕ ಪೋಷಕರ ಸಂಪರ್ಕ, ಶಿಕ್ಷಕರ ಮನೆ ಭೇಟಿ, ಶಾಲೆಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಂಪನ್ಮೂಲ ಬ್ಲಾಗ್ ಗಳ ಸದುಪಯೋಗದ ಪರಿಣಾಮ ನಮ್ಮ ವಿದ್ಯಾರ್ಥಿಗಳ ಕಲಿಕೆಯ ಹಾದಿ ಸುಗಮವಾಯಿತು.

ಪರೀಕ್ಷಾ ಸಮಯ ಹತ್ತಿರ ಬಂದಾಗ ರಾಷ್ಟ್ರ ವ್ಯಾಪಿ ಕೊರೋನ ಎರಡನೇ ಸಲ ತಾಂಡವವಾಡುತ್ತಿತ್ತು. ಪರಿಣಾಮ ಲಾಕ್ ಡೌನ್, ಶಾಲೆಗಳಿಗೆ ರಜೆ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ನಿರಂತರ ಸಂಪರ್ಕಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಿದರು. ಪರಿಕ್ಷಾ ಸ್ವರೂಪ ಬದಲಾಯಿತು. ಎರಡು ದಿನದಲ್ಲಿ ಬಹುಆಯ್ಕೆ ಮಾದರಿಯ ಆರು ವಿಷಯಗಳ ಪರೀಕ್ಷೆ ಮಾಡುವ ನಿರ್ದಾರ ಮಂಡಳಿಯದ್ದಾಯಿತು. 

ಪರೀಕ್ಷೆಯನ್ನು ನಮ್ಮ ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿದ ಪರಿಣಾಮ ಫಲಿತಾಂಶದ ದಿನ ಸಂಭ್ರಮದ ದಿನವಾಯಿತು. ಒಟ್ಟು ಪರೀಕ್ಷೆ ಕುಳಿತ 64 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡು ಸ್ಹಾಳೆಯ ಫಲಿತಾಂಶ ಶೇಕಡಾ 100 ಆಗಿರುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಎಸ್ ಡಿ ಎಂ ಸಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂಧ, ಬೋಧಕೇತರ ಸಿಬ್ಬಂದಿ ಅಭಿನಂದಿಸಿರುತ್ತಾರೆ.

ಅತಿ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳು.

1. ವಿನೋದ್ 582 ಅಂಕಗಳು

2. ಸಯ್ಯದ್ ಸಾದು 581 ಅಂಕಗಳು

3. ವಿನಯ್ 580 ಅಂಕಗಳು


No comments:

Post a Comment

ಚಂದ್ರಸ್ಪರ್ಶ 3.O ನೇರಪ್ರಸಾರ

 ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...