menu

Tuesday, November 10, 2020

ಎಸ್ ಎಸ್ ಎಲ್ ಸಿ ಫಲಿತಾಂಶ 2019 – 2020

ನಿಗದಿಯಂತೆ ಮಾರ್ಚ್ 2019 ಅಂತ್ಯದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪರೀಕ್ಷೆಗಳನ್ನು ನಡೆಸಬೇಕಿತ್ತು ಆದರೆ ಕೊರೋನಾ ವೈರಸ್ ಹಾವಳಿಯಿಂದ ಪರೀಕ್ಷಾ ಮಂಡಳಿಯ ಪರೀಕ್ಷೆಗಳನ್ನು ಮುಂದೂಡಿತು. ಎಲ್ಲಾ ಶಾಲೆಗಳು ಮುಚ್ಚಿದವು. ಈ ಹಂತದಲ್ಲಿ ಪರೀಕ್ಷೆ ಬರೆಯಬೇಕಾದ ಹತ್ತನೇ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯಾವುದೇ ಆತಂಕಕ್ಕೆ ಒಳಗಾಗದೆ ನಿರಂತರವಾಗಿ ರಜಾ ಅವಧಿಯಲ್ಲಿ ಪರಸ್ಪರ ಸಂಪರ್ಕವನ್ನು ಏರ್ಪಡಿಸಿಕೊಂಡು ಮೊಬೈಲ್ ಸಂವಹನದ ಮೂಲಕ  ಪಾಠಗಳಿಗೆ ಸಂಬಂಧಿಸಿದ ಯೂಟ್ಯೂಬ್ ಪಾಠಗಳನ್ನು ವಿದ್ಯಾರ್ಥಿಗಳಿಗೆ ಶೇರ್ ಮಾಡುವುದರ ಮೂಲಕ, ವಾಟ್ಸಪ್ ಮೂಲಕ,  ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಚಟುವಟಿಕೆಗಳನ್ನು ನೀಡುವ ಮೂಲಕ ಜೊತೆಯಲ್ಲಿ ಚಂದನವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾದ ಪುನರ್ಮನನ ತರಗತಿಗಳಿಂದ ಪಠ್ಯಾಂಶದ ಮೇಲೆ ರಜಾ ಅವಧಿಯಲ್ಲಿ ಹಿಡಿತವನ್ನು ಸಾಧಿಸಿದರು. ಪರಿಣಾಮವಾಗಿ 2019ರ ಜೂನ್ ಜುಲೈ  ಪರೀಕ್ಷೆಯನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ಗೆದ್ದುಬಿಟ್ಟರು.

ನಮ್ಮ ಶಾಲೆಯ ಒಟ್ಟು 61 ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ ನಾಲ್ಕು ವಿದ್ಯಾರ್ಥಿಗಳು ಅತ್ಯುನ್ನತ  ದರ್ಜೆಯಲ್ಲಿ ತೇರ್ಗಡೆ ಹೊಂದಿದರು, 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು ಒಂದು ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಈ ಮೂಲಕ ಶಾಲೆಗೆ ಶೇಕಡ 100 ಫಲಿತಾಂಶವನ್ನು ನೀಡಿದರು ಈ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ಶಾಲಾ ಎಸ್ಡಿಎಂಸಿ ಗ್ರಾಮಸ್ಥರು ಪೋಷಕರ ಪರವಾಗಿ ಅಭಿನಂದನೆಗಳು.

 

ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿ

ರುಕ್ಕಿಯ ಗಳಿಸಿದ ಅಂಕಗಳು 599



ಉಷಾ ಗಳಿಸಿದ ಅಂಕಗಳು 564



ಉಮೇಶ ಗಳಿಸಿದ ಅಂಕಗಳು 550



ಪ್ರಿಯ ಗಳಿಸಿದ ಅಂಕಗಳು 538



No comments:

Post a Comment

ಚಂದ್ರಸ್ಪರ್ಶ 3.O ನೇರಪ್ರಸಾರ

 ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...