menu

Monday, January 31, 2022

ಗಣ ರಾಜ್ಯೋತ್ಸವ ದಿನಾಚರಣೆ 2022

 ದಿನಾಂಕ 26.01.2022 ರಂದು ನಮ್ಮ ಶಾಲೆಯಲ್ಲಿ ಸಡಗರ ಸಂಭ್ರಮದಿಂದ 73ನೇ ಗಣ ರಾಜ್ಯೋತ್ಸವ ರಾಷ್ಟ್ರೀಯ ಕಾರ್ಯಕ್ರಮವನ್ನು ಆಚರಿಸಲಾಯಿತು. ದ್ವಜಾರೋಹನವನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು, ಶಾಲಾ ಮುಖ್ಯ ಶಿಕ್ಷಕರು  ನೆರವೇರಿಸಿದರು. ಶಾಲಾ ಶಿಕ್ಷಕರಾದ ಶ್ರೀ ಜಯಶೀಲರವರು ಪ್ರಧಾನ ಭಾಷಣ ಮಾಡಿದರು. ವಿದ್ಯಾರ್ಥಿಗಳು ಭಾಷಣ ಮಾಡಿದರು ಮತ್ತು ದೇಶ ಭಕ್ತಿಗೀತೆಗಳನ್ನು ಹಾಡಿದರು. ಸಂಜೆ 5 ಗಂಟೆಗೆ ಗೌರವದಿಂದ ಧ್ವಜಾವರೋಹಣ ಮಾಡಲಾಯಿತು



Sunday, January 30, 2022

ನೂತನ ಮುಖ್ಯ ಶಿಕ್ಷಕರಿಗೆ ಸ್ವಾಗತ

ದಿನಾಂಕ 28.12.2021 ರಂದು ನಮ್ಮ ಶಾಲೆಗೆ ನೂತನ ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಶ್ರೀ ಕೆ.ಸಿ.ನರಸಿಂಹ ಮೂರ್ತಿ ರವರಿಗೆ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರ ಬಳಗ, ಶಾಲಾ ಎಸ್.ಡಿ.ಎಂ.ಸಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರ ಪರವಾಗಿ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತೇವೆ.


ಕನಕದಾಸರ ಜಯಂತಿ 2021

 ದಿನಾಂಕ 22.11.2021 ರಂದು ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಕನಕದಾಸರ ಕೀರ್ತನೆಗಳನ್ನು ಹಾಡುವುದರ ಮೂಲಕ ಶಾಲೆಯಲ್ಲಿ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಪೋಷಕ ವೃಂದ, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ಬಳಗದವರು ಹಾಜರಿದ್ದರು. 



ಕನ್ನಡ ರಾಜ್ಯೋತ್ಸವ 2021

 ದಿನಾಂಕ 01.11.2021 ರಂದು ನಮ್ಮ ಶಾಲೆಯಲ್ಲಿ ನಾಡ ದಿನಾಚರಣೆ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಬಹು ಅಲಂಕೃತ ಕನ್ನಡ ತಾಯಿಗೆ ನಮಿಸುವ ಮಾದರಿಗೆ ಪುಷ್ಪಾರ್ಚನೆ ಮತ್ತು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು, ಎಸ್ ಡಿ ಎಂ ಸಿ ಅದ್ಯಕ್ಷರು, ಸದಸ್ಯರು, ಶಿಕ್ಷಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.


FIRST POST

 ;odsirj;OSIEjf;OIen [oWU[93Qu []93UT[3 r ][9Q(up[      9u2 [9qU[]90     U4[90 []N04[R09     82U4P980     724P98     624