menu

Saturday, August 14, 2021

ಸ್ವಾತಂತ್ರ್ಯ ದಿನಾಚರಣೆ - 15.08.2021

 ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ನಮ್ಮ ಶಾಲೆಯಲ್ಲಿ ಸಡಗರ ಮತ್ತು ಅರ್ಥಪೂರ್ಣವಾಗಿ SOP ಅನುಸರಣೆಯೊಂದಿಗೆ ಆಚರಿಸಲಾಯಿತು.



ಧ್ವಜಾರೋಹಣದ ನಂತರ ಮಕ್ಕಳು ಬಿಡಿಸಿದ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಅನಾವರಣಗೊಳಿಸಲಾಯಿತು. ನಮ್ಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ರಾಣಿ ಅಬ್ಬಕ್ಕ ವೇಷದಾರಿಯಾಗಿ ಪ್ರದರ್ಶಿಸಿದ ವೀಡಿಯೋ ಅನ್ನು ವೀಕ್ಷಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಅಬ್ದುಲ್ ನಜೀರ್ ಸಾಬ್ ರವರು, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಕ್ಬರ್ ರವರು, ಎಲ್ಲ ಎಸ್ ಡಿ ಎಂ ಸಿ ಸದಸ್ಯರು, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.



Friday, August 13, 2021

ಎಸ್ ಎಸ್ ಎಲ್ ಸಿ ಫಲಿತಾಂಶ 2020 - 2021

 ಕೊರೋನ ಎರಡನೇ ಅಲೆಯ ನಡುವೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಗೆದ್ದು ಸಂಭ್ರಮಿಸಿದ್ದಾರೆ. ಇಡೀ ಶೈಕ್ಷಣಿಕ ವರ್ಷದಲ್ಲಿ ಭೌತಿಕ ತರಗತಿಗಳು ಕೇವಲ 60 ರಿಂದ 70 ದಿನಗಳು ನಡೆದಿದ್ದರು ಕೂಡ ಮಕ್ಕಳು ವರ್ಷ ಪೂರ್ತಿ ವಿದ್ಯಾಗಮ, ಗೂಗಲ್ ಮೀಟ್ ಆನ್ಲೈನ್ ತರಗತಿಗಳು, ವಾಟ್ಸಾಪ್ ಮೂಲಕ ನಿರಂತರ ವಿದ್ಯಾರ್ಥಿ ಶಿಕ್ಷಕ ಪೋಷಕರ ಸಂಪರ್ಕ, ಶಿಕ್ಷಕರ ಮನೆ ಭೇಟಿ, ಶಾಲೆಯ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಂಪನ್ಮೂಲ ಬ್ಲಾಗ್ ಗಳ ಸದುಪಯೋಗದ ಪರಿಣಾಮ ನಮ್ಮ ವಿದ್ಯಾರ್ಥಿಗಳ ಕಲಿಕೆಯ ಹಾದಿ ಸುಗಮವಾಯಿತು.

ಪರೀಕ್ಷಾ ಸಮಯ ಹತ್ತಿರ ಬಂದಾಗ ರಾಷ್ಟ್ರ ವ್ಯಾಪಿ ಕೊರೋನ ಎರಡನೇ ಸಲ ತಾಂಡವವಾಡುತ್ತಿತ್ತು. ಪರಿಣಾಮ ಲಾಕ್ ಡೌನ್, ಶಾಲೆಗಳಿಗೆ ರಜೆ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ನಿರಂತರ ಸಂಪರ್ಕಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಿದರು. ಪರಿಕ್ಷಾ ಸ್ವರೂಪ ಬದಲಾಯಿತು. ಎರಡು ದಿನದಲ್ಲಿ ಬಹುಆಯ್ಕೆ ಮಾದರಿಯ ಆರು ವಿಷಯಗಳ ಪರೀಕ್ಷೆ ಮಾಡುವ ನಿರ್ದಾರ ಮಂಡಳಿಯದ್ದಾಯಿತು. 

ಪರೀಕ್ಷೆಯನ್ನು ನಮ್ಮ ವಿದ್ಯಾರ್ಥಿಗಳು ಸಮರ್ಥವಾಗಿ ಎದುರಿಸಿದ ಪರಿಣಾಮ ಫಲಿತಾಂಶದ ದಿನ ಸಂಭ್ರಮದ ದಿನವಾಯಿತು. ಒಟ್ಟು ಪರೀಕ್ಷೆ ಕುಳಿತ 64 ವಿದ್ಯಾರ್ಥಿಗಳಲ್ಲಿ 35 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ, 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡು ಸ್ಹಾಳೆಯ ಫಲಿತಾಂಶ ಶೇಕಡಾ 100 ಆಗಿರುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಎಸ್ ಡಿ ಎಂ ಸಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂಧ, ಬೋಧಕೇತರ ಸಿಬ್ಬಂದಿ ಅಭಿನಂದಿಸಿರುತ್ತಾರೆ.

ಅತಿ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳು.

1. ವಿನೋದ್ 582 ಅಂಕಗಳು

2. ಸಯ್ಯದ್ ಸಾದು 581 ಅಂಕಗಳು

3. ವಿನಯ್ 580 ಅಂಕಗಳು


Tuesday, August 3, 2021

NMMS 2020 - 2021

 



2020 - 2021 ನೇ ಸಾಲಿನಲ್ಲಿ ನಡೆದ 8ನೇ ತರಗತಿಯ ಮಕ್ಕಳಿಗೆ  NMMS ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳಾದ ಕು. ಕಾರ್ತಿಕ್.ಬಿ.ಕೆ ಮತ್ತು ಕು. ಅರುಣ್ ಕುಮಾರ್ ತೇರ್ಗಡೆಗೊಂಡು 4 ವರ್ಷಗಳ ಆವಧಿಗೆ ನಿರಂತರ ವಾರ್ಷಿಕ 12000.00 ರೂ ಗಳ ವಿದ್ಯಾರ್ಥಿ ವೇತನಕ್ಕೆ ಆಯ್ಕೆಗೊಂಡಿರುತ್ತಾರೆ. ಇವರಿಗೆ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂಧಿ, ಶಾಲಾ ಎಸ್.ಡಿ.ಎಂ.ಸಿ ಪರವಾಗಿ ಅಭಿನಂದನೆಗಳು.

ಚಂದ್ರಸ್ಪರ್ಶ 3.O ನೇರಪ್ರಸಾರ

 ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...