menu

Wednesday, July 14, 2021

ಬೀಳ್ಕೊಡುಗೆ ಸಮಾರಂಭ - 14.07.2021

 


ನಮ್ಮ ಶಾಲೆಯಲ್ಲಿ ದಿನಾಂಕ 12.11.2020 ರಿಂದ 11.06.2021 ರವರೆಗೆ ನಮ್ಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಡಯಟ್ ಉಪನ್ಯಾಸಕರಾಗಿ ವರ್ಗಾವಣೆಗೊಂಡ ಶ್ರೀಮತಿ ಜಯಂತಿ.ಎನ್. ರವರಿಗೆ ದಿನಾಂಕ 14.07.2021 ರಂದು ಶಾಲೆಯ ಎಲ್ಲಾ ಶಿಕ್ಷಕ ಬಳಗ, ಸಿಬ್ಬಂದಿ ವರ್ಗ ಮತ್ತು ಎಸ್ಡಿಎಂಸಿ ಬಳಗದಿಂದ ಹೃದಯಸ್ಪರ್ಶಿ ಬೀಳ್ಕೊಡುಗೆಯನ್ನು ನೀಡಲಾಯಿತು.

ಇವರು ನಮ್ಮ ಶಾಲೆಯಲ್ಲಿ 7ತಿಂಗಳು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಯಲ್ಲಿ ಹಲವು ಪ್ರಮುಖ ಶಾಲೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಪ್ರತಿ ಕೋಣೆಗೂ ವಿದ್ಯುದೀಕರಣ, ಶಾಲಾ ವಿದ್ಯಾರ್ಥಿಗಳಿಗೆ ಪಬ್ಲಿಕ್ ಟಿವಿ ನೆರವಿನಿಂದ ಉಚಿತ ಟ್ಯಾಬ್ ವಿತರಣೆ, ಹಲವು ಸಂಸ್ಥೆ ಮತ್ತು ವ್ಯಕ್ತಿಗಳಿಂದ ಶಾಲೆಗೆ ದೇಣಿಗೆ ತಂದು ಶಾಲಾಭಿವೃದ್ಧಿ ಹೊಂದಲು ವ್ಯವಸ್ಥೆ ಮಾಡಿದರು.

Tuesday, July 13, 2021

ವಿಶ್ವ ಪರಿಸರ ದಿನಾಚರಣೆ 2021

 ದಿನಾಂಕ 05.06.2021 ರಂದು ಆನ್ಲೈನ್ ಮೂಲಕ ಡಾ.ಎಂ.ಎಸ್.ಸ್ವಾಮಿನಾಥನ್ ಇಕೋ ಕ್ಲಬ್ ಮತ್ತು ರಾಜ ರವಿವರ್ಮ ಚಿತ್ರಕಲಾ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ವಿದ್ಯಾರ್ಥಿಗಳು ತಾವು ಸಸಿ ನೀಡುತ್ತಿರುವ ಮತ್ತು ಪರಿಸರ ಸಂರಕ್ಷಣೆ ಕುರಿತು ಬಿಡಿಸಿದ ಚಿತ್ರವನ್ನು ವಾಟ್ಸಾಪ್ ಮೂಲಕ ಕಳಿಸಿದರು.

ಸಂಜೆ 6 ರಿಂದ 8 ಗಂಟೆಯವರೆಗ ಗೂಗಲ್ ಮೀಟ್ ನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರು ಮಹಾರಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾದ ಶ್ರೀಮತಿ ತೇಜೋವತಿ ಮೇಡಂ ರವರು ಭಾಗವಹಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾತಾಡಿದರು. ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾದ ಶ್ರೀ ವೈ.ಕೆ.ತಿಮ್ಮೇಗೌಡ ರವರು ಭಾಗವಹಿಸಿ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.



ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ

ದಿನಾಂಕ 14.04.2021 ರಂದು SOP ಅನುಗುಣವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಶಾಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ, SDMC ಅಧ್ಯಕ್ಷರಾದ ಶ್ರೀ ಅಕ್ಬರ್ ರವರು, ಗ್ರಾಮದ ಮುಖಂಡರಾದ ಶ್ರೀ ಅಬ್ದುಲ್ ನಜೀರ್ ಸಾಬ್ ರವರು ಉಪಸ್ಥಿತರಿದ್ದರು. ಶಾಲೆಯ ಶಿಕ್ಷಕರಾದ ಶ್ರೀ ಜಯಶೀಲ್ ರವರು ಅಂಬೇಡ್ಕರ್ ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ಪ್ರಧಾನ ಭಾಷಣದಲ್ಲಿ ತಿಳಿಸಿದರು.


ಚಂದ್ರಸ್ಪರ್ಶ 3.O ನೇರಪ್ರಸಾರ

 ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...