menu

Wednesday, December 16, 2020

ಅಂತರಿಕ್ಷಾ

ಪಿ.ಎಸ್.ಎಲ್.ವಿ - ಸಿ 50 ಉಡಾವಣೆಯ ಮರು ಪ್ರಸಾರದ ವೀಕ್ಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ.
ದಿನಾಂಕ 17.12.2020 ರ ಅಪರಾಹ್ನ 3.05 ರಲ್ಲಿ ಪ್ರಸಾರಗೊಂಡಿರುತ್ತದೆ.


ಸಂಪರ್ಕ ಸೇವೆಗೆ ಬಳಸಲಾಗುವ ಉಪಗ್ರಹ ಸಿಎಂಎಸ್–01 ಅನ್ನು ಪೊಲಾರ್ ಉಪಗ್ರಹ ಉಡಾವಣಾ ವಾಹಕ (ಪಿಎಸ್ಎಲ್‌ವಿ–ಸಿ50) ಮೂಲಕ ಡಿಸೆಂಬರ್ 17ರಂದು ಉಡಾವಣೆ ಮಾಡಲಾಗುತ್ತದೆ.

ಶ್ರೀಹರಿಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ನಡೆಯಲಿದ್ದು, ಇದು ಪಿಎಸ್‌ಎಲ್‌ವಿ ಸರಣಿಯ 5ನೇ ಕಾರ್ಯಕ್ರಮವಾಗಿದೆ. ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ಅಂದು ಮಧ್ಯಾಹ್ನ 3.41 ಗಂಟೆಗೆ ಉಡಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೊ ಸಂಸ್ಥೆಯ ತಿಳಿಸಿದೆ.

ಸಿಎಂಎಸ್‌ –01 ಸಂಪರ್ಕ ಸೇವೆಯ ಉಪಗ್ರಹವಾಗಿದ್ದು, ವಿಸ್ತರಿಸಲಾದ ಸಿ–ಬ್ಯಾಂಡ್‌ ತರಂಗಾಂತರದಲ್ಲಿ ಸೇವೆಯನ್ನು ಕಲ್ಪಿಸಲಿದೆ ಎಂದು ಹೇಳಿಕೆಯು ತಿಳಿಸಿದೆ. ಇದು, ಭಾರತದ 43ನೇ ಸಂವಹನ ಉಪಗ್ರಹವಾಗಿದೆ.

Friday, December 4, 2020

ಡಿಡಿ ಚಂದನ - NTSE ಮತ್ತು NMMS

ದಿನಾಂಕ 04.12.2020 ರಂದು ಡಿಡಿ ಚಂದನದಲ್ಲಿ ಪ್ರಸಾರವಾದ NTSE ಮತ್ತು NMMS ಪರೀಕ್ಷೆಗಳ ಕುರಿತು ಕಾರ್ಯಕ್ರಮದ ಮರು ಪ್ರಸಾರ



ಶ್ರೀ ಕನಕದಾಸ ಜಯಂತಿ ಆಚರಣೆ – 03.12.2020

 


Thursday, December 3, 2020

ಸಂವಿಧಾನ ದಿನಾಚರಣೆ 26 ನವೆಂಬರ್ 2020

ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದುತ್ತಿರುವ ನಮ್ಮ ಶಾಲೆಯ ವಿದ್ಯಾರ್ಥಿನಿ ಕು.ಪಲ್ಲವಿ, 10 ನೇತರಗತಿ



ದಿನಾಂಕ 26.11.2020 ರಂದು ನಮ್ಮ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆಯ ವಿಸ್ತೃತ ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಲ್ಯಾಪ್ ಟಾಪ್ ಬಹುಮಾನ ಸ್ವೀಕಾರ

 



2019-2020 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ವಿಭಾಗದಲ್ಲಿ ಪಿರಿಯಾಪಟ್ಟಣ ತಾಲ್ಲೋಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡ ನಮ್ಮ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ ಕು.ರುಕ್ಕಿಯಾಳಿಗೆ ದಿ.13.11.2020 ರಂದು ಬಹುಮಾನವಾಗಿ ಲ್ಯಾಪ್ ಟಾಪ್ ವಿತರಿಸಲಾಯಿತು.ಪಿರಿಯಾಪಟ್ಟಣದಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಶಾಸಕರಾದ ಶ್ರೀ ಮಹದೇವ್ ರವರು ಲ್ಯಾಪ್ ಟಾಪ್ ಅನ್ನು ವಿತರಿಸಿದರು. ಸಮಾರಂಭದಲ್ಲಿ ತಾಲ್ಲೋಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೈ.ಕೆ.ತಿಮ್ಮೇಗೌಡರವರು, ನಮ್ಮ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಜಯಂತಿರವರು ಮತ್ತು ನಮ್ಮ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ಅನುಸೂಯ ರವರು ಉಪಸ್ಥಿತರಿದ್ದರು.

ಚಂದ್ರಸ್ಪರ್ಶ 3.O ನೇರಪ್ರಸಾರ

 ಜಗತ್ತೇ ಕೌತುಕದಿಂದ ಕಾಯುತ್ತಿರುವ ಭಾರತದ ಚಂದ್ರಯಾನ 3.O ಚಂದ್ರಸ್ಪರ್ಶದ ನೇರಪ್ರಸಾರ ದಿನಾಂಕ 23.08.2023 ರ ಸಂಜೆ 5.20 ರಿಂದ ವೀಕ್ಷಿಸಿ.  ಜೈ ಭಾರತ, ಜೈ ವಿಜ್ಞಾನ, ಜ...